ಮಂಗಳೂರು ಹಂಚು
೧. ಜೇಡಿಮಣ್ಣನ್ನು (ಆವೆಮಣ್ಣು) ಸಮೀಪದ ಗಡ್ಡೆಗಳಿಂದ ತಂದು ಕಾರ್ಖಾನೆಯ ಸಮೀಪ ವಿಶಾಲವಾದ ಸ್ಥಳಗಳಲ್ಲಿ ಶೇಖರಿಸಿಡುತ್ತಾರೆ.
೨. ನಂತರ ಅದನ್ನು ಶುದ್ಧೀಕರಿಸಿ ಅದಕ್ಕೆ ಅಗತ್ಯವಿರುವ ನೀರನ್ನು ಸೇರಿಸಿ ಮಣ್ಣನ್ನು ಹದಮಾಡಲಾಗುತ್ತದೆ.
೩. ಮತ್ತೇ ಮಣ್ಣನ್ನು ಅಲ್ಲಿಂದ “ಏಜಿಂಗ್ ಸೆಕ್ಷನ್” (Aging section) ಗೆ ಸಾಗಿಸಿ ಅಲ್ಲಿ ಸಾಧಾರಣ ಮೂರುವಾರ ಇಡುತ್ತಾರೆ. ಅಲ್ಲಿ ಅದಕ್ಕೆ ಆಗ್ಗಾಗೆ ನೀರನ್ನು ಚಿಮುಕಿಸಲಾಗುತ್ತದೆ.
೪. ನಂತರ ಅದನ್ನು ಅಲ್ಲಿಂದ ತೆಗೆದು “ಪಗ್ ಮಿಲ್ಲು” (Pugmill) ಗೆ ಹಾಕುತ್ತಾರೆ. ಅಲ್ಲಿಂದ ನಿರ್ದಿಷ್ಟ ಆಕಾರದಲ್ಲಿ ಮಣ್ಣಿನ ಬ್ಲಾಕ್‍ಗಳು ಹೊರ ಬಂದು ಅದು “ಕಟ್ಟಿಂಗ್ ಟೇಬಲ್” ಗಳ ಮೂಲಕ ಮುಂದೆ ಚಲಿಸುವಾಗ ಅದನ್ನು ಹಾಳೆಗಳನ್ನಾಗಿ (Slab) ಕತ್ತರಿಸುತ್ತಾರೆ. ಹೀಗೇ ಕತ್ತರಿಸಲಾದ ಮಣ್ಣಿನ ಹಾಳೆಗಳನ್ನು ಒಣಗಿಸಲು ಒಂದು ದಿನ ಅಲ್ಲಿಯೇ ಬಿಡಲಾಗುತ್ತದೆ.
೫. ಈ ಹಾಳೆಗಳನ್ನು ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಲಾಗುತ್ತದೆ.
೬. ಕತ್ತರಿಸಿದ ತುಂಡುಗಳನ್ನು ತಿರುಗುವ ಪ್ರೆಸ್ಸ್ ಅಥವಾ ಕೈ ಚಾಲಿತ ಪ್ರೆಸ್ಸಿಗೆ ಹಾಕಿ ಅಲ್ಲಿ ಅಚ್ಚು ಒತ್ತುತ್ತಾರೆ.
೭. ಪ್ರೆಸ್ಸಿನಿಂದ ಹೊರಬಂದ ಹಂಚುಗಳು ಬದಿಯನ್ನು ನಂತರ ಕತ್ತರಿಸಲಾಗುತ್ತದೆ.
೮. ನಂತರ ಮಳೆಗಾಲದಲ್ಲಿ ಆದರೆ ೩ ವಾರ ಕಾಲ, ಇತರ ಸಮಯದಲ್ಲಿ ೮ರಿಂದ ೧೨ ದಿನಗಳ ಕಾಲ ಈ ಹಸಿ ಹಂಚನ್ನು ನೆರಳಿನಲ್ಲಿ ಒಣಗಿಸಬೇಕು.
೯. ನೆರಳಿನಲ್ಲಿ ಒಣಗಿದ ಹಂಚುಗಳನ್ನು ಗೂಡಿನಲ್ಲಿಟ್ಟು ೮೫೦೦C ನಿಂದ ೯೦೦೦C ಉಷ್ಣಾಂಶದಲ್ಲಿ ಬೇಯಿಸಲಾಗುತ್ತದೆ. ಸಾಮಾನ್ಯ ಗೂಡಿನ ಒಳಗೆ ೫೦೦೦ದಿಂದ ೭೦೦೦ ತನಕ ಹಂಚುಗಳನ್ನು ಇಟ್ಟು ಬೇಯಿಸಲು ಸಾಧ್ಯವಿದೆ.
೧೦. ಸುಟ್ಟ ಹಂಚುಗಳನ್ನು ೪೮ ಗಂಟೆಕಾಲ ಬಿಸಿ ಆರಲು ಗೂಡಿನಲ್ಲಿಯೇ ಬಿಡುತ್ತಾರೆ.
೧೧. ನಂತರ ಅಲ್ಲಿಂದ ಹಂಚುಗಳನ್ನು ತೆಗೆದು, ಅವುಗಳನ್ನು ಪರೀಕ್ಷಿಸಿ ಬೇರೆ ಬೇರೆ ಗುಣಮಟ್ಟದ ಹಂಚುಗಳನ್ನಾಗಿ ವಿಂಗಡಿಸುತ್ತಾರೆ.
೧೨. ಈಗ ಹಂಚುಗಳು ಮಾರಾಟಕ್ಕೆ ಸಿದ್ಧವಾಗಿರುತ್ತವೆ.
ಮೇಲ್ಛಾವಣೆಗೆಗೆ ಹೊದಿಸುವ ಈ ಮಣ್ಣಿನ ಹಂಚುಗಳಿಗೆ ರಾಷ್ಟ್ರೀಯ ಗುಣ ಮಟ್ಟವನ್ನು ನಿಯಮಿಸಲಾಗಿದೆ. ಭಾರತದೊಳಗೆ ತಯಾರಾಗುವ ಹಂಚು ನಿರ್ದಿಷ್ಟ ಪಡಿಸಿರುವ ಗುಣಮಟ್ಟವನ್ನು ಹೊಂದಿದ್ದರೆ ಅದಕ್ಕೆ ಐ. ಎಸ್. ನಂಬ್ರ : ೬೫೪ರನ್ವಯ ಗುಣಮಟ್ಟವನ್ನು ಹೊಂದಿರುವ ಶಿಫಾರಸ್ಸು ಪತ್ರವನ್ನು ನೀಡಲಾಗುತ್ತದೆ.
ಅಗತ್ಯವಿರುವ ಯಂತ್ರ ಸಾಮಗ್ರಿಗಳು
೧. ಪಗ್ ಮಿಲ್ಲ್ (Pug mill)
೨. ಸ್ಕ್ರೂ ಪ್ರೆಸ್ಸ್ (Screw press)
೩. ಕಟ್ಟಿಂಗ್ ಟೇಬಲ್ (Cutting table)
೪. ವುಡನ್ ಪ್ಯಾಲೆಟ್ಸ್ ಆಂಡ್ ರ‍್ಯಾಕ್ಸ್ (wooden pallets and racks)
೫. ಹಂಚನ್ನು ಸುಡುವ ಗೂಡು (Klin)
೬. ಡೈ….. ಇತ್ಯಾದಿ,
ಈ ಉದ್ಯಮವನ್ನು ಸ್ಥಾಪಿಸಲು ಸುಮಾರು ೧೫೦೦ ಚದರ ಮೀಟರ್ ವಿಸ್ತಾರದ ಪ್ರದೇಶ ಮತ್ತು ಅದರಲ್ಲಿ ಕಟ್ಟಿರುವ ೨೫೦ ಚದರ ಮೀಟರ್ ವಿಸ್ತಾರದ ಕಟ್ಟಡ ಅಗತ್ಯವಿದೆ. ಇಡಿ ಹೂಡಿಕೆಯಾದ ಬಂಡವಾಳದ ಮೆಲೆ ೧೦% ದಷ್ಟು ಲಾಭಾಂಶವನ್ನು ನೀರಿಕ್ಷಿಸಬಹುದು.
ಇಟ್ಟಿಗೆ ತಯಾರಿಹಂಚಿನ ಕಾರ್ಖಾನೆಯಲ್ಲಿ ಹಂಚಿನೊಂದಿಗೆ ತಯಾರಿಸಲಾಗುವ ಇನ್ನೊಂದು ಮುಖ್ಯ ಉತ್ಪನ್ನ ಸುಟ್ಟ ಇಟ್ಟಿಗೆ ಮತ್ತು ಬ್ಲಾಕ್ಸ್. ಹಂಚು ತಯಾರಿ ಮತ್ತು ಇಟ್ಟಿಗೆ ತಯಾರಿಯ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಜೇಡಿಮಣ್ಣು ಅಥವಾ ಸುಟ್ಟ ಇಟ್ಟಿಗೆಯ ಪುಡಿ ಇವು ಇಟ್ಟಿಗೆ ಮತ್ತು ಬ್ಲಾಕ್ಸ್ ತಯಾರಿಕೆಗೆ ಅಗತ್ಯವಿರುವ ಮುಖ್ಯ ಕಚ್ಚಾವಸ್ತುಗಳು. ಇಟ್ಟಿಗೆ ತಯಾರಿಯ ಅಂತಿಮ ಹಂತದಲ್ಲಿ ಅದರಲ್ಲಿ ಯಾವುದೇ ಬಿರುಕು ಬೀಳದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಆರಂಭದಲ್ಲಿ ಈ ಕಚ್ಚಾವಸ್ತುಗಳಲ್ಲಿರುವ ಆರುವ ಅಥವಾ ವಾಯುರೂಪವಾಗುವ ವಸ್ತುಗಳನ್ನು ತೆಗೆದುಹಾಕಲು ಇಟ್ಟಿಗೆ ಗೂಡಿನಲ್ಲಿ ಈ ಕಚ್ಚಾವಸ್ತುಗಳನ್ನು ೧೧೦೦೦C ನಿಂದ ೧೩೦೦೦C ಉಷ್ಣಾಂಶದಲ್ಲಿ ಸುಟ್ಟು ಬೂದಿಮಾಡಲಾಗುತ್ತದೆ. ಈ ಸುಟ್ಟಮಣ್ಣಿನ ಬೂದಿಯನ್ನು ಜ್ವೌಕ್ರಶರ್ ಅಥವಾ ಟ್ಯುಬ್‍ಮಿಲ್‍ನಲ್ಲಿ ಹಾಕಿ ಚೆನ್ನಾಗಿ ಹಿಸುಕಲಾಗುತ್ತದೆ ಅಥವಾ ಪುಡಿಮಾಡಲಾಗುತ್ತದೆ. ನಂತರ ಈ ಹುಡಿಗೆ ನೀರು ಹಾಕಿ ಅದನ್ನು ಒದ್ದೆಮಾಡಿ ಪಗ್‍ಮಿಲ್‍ಗೆ ಹಾಕಲಾಗುತ್ತದೆ. ನಂತರ ಸಿಗುವ ಹದವಾದ ಮಣ್ಣನ್ನು ವಿವಿಧ ಅಚ್ಚಿಗೆ ಹಾಕಿ ಅಗತ್ಯವಿರುವ ಆಕಾರದಲ್ಲಿ ಇಟ್ಟಿಗೆ ಮತ್ತು ಬ್ಲಾಕ್ಸ್ ಗಳನ್ನು ತಯಾರಿಸಲಾಗುತ್ತದೆ. ಮತ್ತೇ ಈ ಹಸಿ ಇಟ್ಟಿಗೆಗಳನ್ನು ಹಲವು ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ ನಂತರ ಇಟ್ಟಿಗೆ ಗೂಡಿನಲ್ಲಿ ೧೩೫೦೦C ನಿಂದ ೧೩೫೦೦C ಉಷ್ಣಾಂಶದಲ್ಲಿ ಬೇಯಿಸಲಾಗುತ್ತದೆ. ಸುಟ್ಟು ಇಟ್ಟಿಗೆಗಳನ್ನು ನಂತರ ೪೮ ಗಂಟೆಕಾಲ ತಣಿಯಲು ಇಟ್ಟಿಗೆ ಗೂಡಿನಲ್ಲಿಯೇ ಬಿಡುತ್ತಾರೆ. ನಂತರ ಗೂಡಿನಿಂದ ಹೊರತೆಗೆದ ಇಟ್ಟಿಗೆಗಳನ್ನು ಗುಣಮಟ್ಟ ಪರೀಕ್ಷೆಸುವುದಕ್ಕಾಗಿ ಹಾಳಾದ ಇಟ್ಟಿಗೆಗಳನ್ನು ಪ್ರತ್ಯೇಕಿಸುದಕ್ಕಾಗಿ ಪರೀಕ್ಷಿಸಿ ನಂತರ ಶೇಖರಿಸಿಡಲಾಗುತ್ತದೆ. ಈಗ ಇಟ್ಟಿಗೆ ಮತ್ತು ಬ್ಲಾಕ್ಸ್ ಗಳು ಮಾರಾಟಕ್ಕೆ ಸಿದ್ಧವಾಗಿವೆ.
ಸುಟ್ಟ ಇಟ್ಟಿಗೆ ಮತ್ತು ಬ್ಲಾಕ್ಸ್ ಗಳಿಗೂ ರಾಷ್ಟ್ರೀಯ ಗುಣಮಟ್ಟವನ್ನು ನಿರ್ಧರಿಸಲಾಗಿದೆ. ಭಾರತ ದೇಶದೊಳಗೆ ತಯಾರಾಗುವ ಇಂತಹ ಇಟ್ಟಿಗೆಗಳು ನಿರ್ಧಿಷ್ಟ ಪಡಿಸಿರುವ ಗುಣಮಟ್ಟವನ್ನು ಹೊಂದಿದ್ದರೆ ಅದಕ್ಕೆ ಐ. ಎಸ್. ನಂಬ್ರ : ೬-೧೯೬೭, ೭-೧೯೬೭ ಮತ್ತು ೮-೧೯೬೭ ರನ್ವಯ ಗುಣಮಟ್ಟದ ಶಿಫಾರಸ್ಸು ಪತ್ರವನ್ನು ನೀಡಲಾಗುತ್ತದೆ.
ಅಗತ್ಯವಿರುವ ಯಂತ್ರ ಸಾಮಾಗ್ರಿಗಳು
೧. ೯’’ X 4”ಜ್ವೌಕ್ರಶರ್
೨. ಎಡ್ಜ್ ರನ್ನರ್ ಮಿಲ್
೩. ೭’ ವ್ಯಾಸದ ಡ್ರೈ ಪಾನ್
೪. ವೈಬ್‍ರೇಟಿಂಗ್ ಸ್ಕ್ರಿನ್
೫. ೨-೩ ಟನ್ ಸಾಮರ್ಥ್ಯದ ಪಗ್‍ಮಿಲ್
೬. ಇಟ್ಟಿಗೆಗಳನ್ನು ಒತ್ತಲು ಕೈಚಾಲಿತ ಪ್ರೆಸ್ಸ್
೭. ೨೦’ ವ್ಯಾಸದ ಕುಲುಮೆ…….ಇತ್ಯಾದಿ.
ಈ ಉದ್ಯಮವನ್ನು ಸ್ಥಾಪಿಸಲು ೨೦೦೦ ಚದರ ಮೀಟರ್ ವಿಸ್ತಾರದ ಪ್ರದೇಶ ಮತ್ತು ಅದರಲ್ಲಿ ಕಟ್ಟಿರುವ ೫೦೦ ಮೀಟರ್ ವಿಸ್ತಾರದ ಕಟ್ಟಡ ಅಗತ್ಯವಿದೆ. ಇಲ್ಲಿ ಹೂಡಿಕೆಯಾದ ಬಂಡವಾಳದ ಮೇಲೆ ೩೫% ದಷ್ಟುಲಾಂಭಾಂಶವನ್ನು ನಿರೀಕ್ಷಿಸಬಹುದು. ಹಂಚು ತಯಾರಿ ಮತ್ತು ಇಟ್ಟಿಗೆ ತಯಾರಿಯ ವಿಧಾನಗಳನ್ನು ಮತ್ತು ಯಂತ್ರಗಳನ್ನು ಬಳಸಿಕೊಂಡೇ ಇತರ ಎಲ್ಲಾ ವಸ್ತುಗಳನ್ನು ಇಲ್ಲಿ ತಯಾರಿಸುತ್ತಾರೆ.
ಹಂಚು ರಫ್ತು
ಹಂಚು ಉದ್ಯಮ ಸ್ಥಾಪನೆಯಾದಂದಿನಿಂದಲೇ ಮಂಗಳೂರು ಹಂಚುಗಳಿಗೆ ಭಾರತದೆಲ್ಲೆಡೆ ಉತ್ತಮ ಬೇಡಿಕೆ ಇತ್ತು, ಮತ್ತು ಈಗಲೂ ಇದೆ. ಇದಲ್ಲದೆ ಶ್ರೀಲಂಕಾ, ಮ್ಯಾನ್‍ಮರ್ (ಬರ್ಮಾ) ಆಫ್ರಿಕ, ಆಸ್ಟ್ರೇಲಿಯ, ಇಂಡೋನೇಷಿಯ, ಫಿಜಿ ಮತ್ತು ಕೊಲ್ಲಿರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಹೀಗೇ ಹಂಚು ಉದ್ಯಮವು ನಮ್ಮ ದೇಶಕ್ಕೆ ವಿದೇಶ ವಿನಿಮಯ ಗಳಿಸಿಕೊಡುವ ಒಂದು ಮುಖ್ಯ ಮೂಲವಾಗಿದೆ. ಮಂಗಳೂರು ಬಂದರಿನಿಂದ ನೇರವಾಗಿ ಮಾತ್ರವಲ್ಲದೇ ಮಂಗಳೂರಿನಿಂದ ದೊಡ್ಡ ದೋಣಿಗಳ ಮೂಲಕ ಕಳುಹಿಸಲ್ಪಟ್ಟ ಹಂಚುಗಳನ್ನು ಮುಂಬಾಯಿ ಬಂದರಿನಲ್ಲಿ ಸ್ವೀಕರಿಸಿ ಅಲ್ಲಿಂದ ರಫ್ತು ಮಾಡಲಾಗುತ್ತದೆ. ವಾರ್ಷಿಕವಾಗಿ ಸುಮಾರು ೧ ೧/೨ ಕೋಟಿಗಿಂತ ಹೆಚ್ಚು ಹಂಚುಗಳನ್ನು ಮಂಗಳೂರಿನಿಂದ ಮುಂಬಯಿಗೆ ಕಳುಹಿಸಲಾಗುತ್ತದೆ. ಮಂಗಳೂರು ಹಂಚುಗಳ ರಫ್ತಿನಲ್ಲಿ ಮುಂಬಾಯಿಯ ಪಾಲು ೨೨% ಇನ್ನು ಕೆಲವು ಬಂದರುಗಳಾದ ದಾಬೋಲ್, ವೆರವಲ್, ರತ್ನಗಿರಿ, ಮತ್ತು ಪಂಜಿಮ್ ಇವು ಒಟ್ಟಿಗೆ ೩೩% ಮಂಗಳೂರು ಹಂಚುಗಳ ರಫ್ತಿಗೆ ಸಹಾಯಕವಾಗಿವೆ.
ಮಂಗಳೂರಿನ ಹಳೇ ಬಂದರಿನ ಮೂಲಕ ಈ ಕೆಳಗಿನ ಸ್ಥಳಗಳಿಗೆ ಹಂಚನ್ನು ರಫ್ತು ಮಾಡಲಾಗುತ್ತದೆ.
೧. ಮುಂಬೈ
೨. ವೆರವಲ್
೩. ದಾಬೋರ್
೪. ರತ್ನಗಿರಿ
೫. ಪಣಜಿ
೬. ಪೋರ್ ಬಂದರ್
೭. ಮರ್ಮಗೋವಾ
೮. ಬ್ರೋಚ್
೯. ಜೈತಾಪುರ
೧೦. ಚಿಲ್ಲಿಕೆರೆ
೧೧. ಬೇತೆಲ್
೧೨. ವಿಜಯದುರ್ಗ
೧೩. ತಲಜ
೧೪. ಜೈಗಲ್
೧೫. ದೇವ್‍ಗಡ್
೧೬. ಆಜಿಕಲ್
೧೭. ಸೂರತ್
೧೮. ಕರಂಜ
೧೯. ಭಾವನಗರ
೨೦. ಸದಾಶಿವಗಢ
೨೧. ಪನ್ವೇಲ್
೨೨. ಬೇಸಿನ್
೨೩. ಚಪೋರ
೨೪. ಪೂರನ್‍ಗಡ್
೨೫. ಬಿಲ್ಲಿಮೋರ್ಡ್
೨೬. ದಾಮನ್
೨೭. ರೇವುದಂಡ
೩೮. ಸತ್ವಥಿ
೨೯. ಕಾಸರಗೋಡು…… ಇತ್ಯಾದಿ.
ಮಂಗಳೂರು ಬಂದರಿನಿಂದ ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಿಗೆ ಮತ್ತು ಗುಜರಾತ್ ಬಂದರಿಗೆ ಕಳುಹಿಸಿದ ಹಂಚುಗಳ ಒಟ್ಟು ಸಂಖ್ಯೆ : (೧೯೮೦ ರ ದಶಕದಲ್ಲಿ)
ವರ್ಷ ಹಂಚು
೧. ೧೯೮೦-೮೧ – ೬,೩೪,೫೪,೧೭೧
೨. ೧೯೮೧-೮೨ – ೬,೬೨,೯೬,೪೪೦
೩. ೧೯೮೨-೮೩ – ೭,೩೪,೮೦,೯೧೪
೪. ೧೯೮೩-೮೪ – ೭,೭೪,೨೯,೪೭೦
೫. ೧೯೮೪-೮೫ – ೭,೪೭,೬೯,೧೦೫
೬. ೧೯೮೫-೮೬ – ೭,೧೭,೮೯,೦೩೩
೭. ೧೯೮೬-೮೭ – ೭,೩೭,೭೪,೦೬೧
ಮಂಗಳೂರು ಬಂದರಿನಿಂದ ಇತರ ಹೊರದೇಶಗಳಿಗೆ ರಫ್ತು ಮಾಡಲ್ಪಟ್ಟ ಹಂಚುಗಳ ಒಟ್ಟು ಸಂಖ್ಯೆ : (ಈಗ ಶ್ರೀಲಂಕಾ ಹಂಚಿನ ರಫ್ತು ಸಂಪೂರ್ಣ ನಿಂತುಹೋಗಿದೆ.

No comments:
Post a Comment